ಕರ್ಮ
ಮಾನವನು ಜನ್ಮಿಸಿದಾಗಿನಿಂದ ಸಾಯುವವರೆಗೂ ಪ್ರತಿದಿನ ಅನೇಕ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೆ. ಕರ್ಮಗಳನ್ನು ಮಾಡಿದರೆ ಅದಕ್ಕೆ ತಕ್ಕ ಪ್ರತಿಫಲ ತಪ್ಪದೇ ಸಿಗುತ್ತದೆ. ಒಳ್ಳೆಯದು ಮಾಡಿದರೆ ಒಳ್ಳೆಯದು, ಕೆಟ್ಟದ್ದು ಮಾಡಿದರೆ ಕೆಟ್ಟ ಫಲ ಸಿಗುತ್ತದೆ. ಕರ್ಮವನ್ನು ಮಾಡುವುದರಿಂದ ಏರ್ಪಡುವ ಕರ್ಮ-ಫಲವನ್ನು ತಪ್ಪದೇ ಅನುಭವಿಸಬೇಕು. ಇದು ಕರ್ಮ ಸಿದ್ಧಾಂತ.
ಪರಿಣಾಮಗಳನ್ನು ನೀಡುವ ಸಮಯವನ್ನು ಆಧರಿಸಿ ಕರ್ಮಗಳನ್ನು ಮೂರು ತರಹ ವಿಂಗಡಿಸಬಹುದು. ಅವು 1) ಆಗಾಮಿ ಕರ್ಮಗಳು 2) ಸಂಚಿತ ಕರ್ಮಗಳು 3) ಪ್ರಾರಬ್ಧಕರ್ಮಗಳು. ಇಂದಿನಿಂದ ಭವಿಷ್ಯತ್ತಿನಲ್ಲಿ ಮಾಡುವಂಥಹ ಕರ್ಮಗಳನ್ನು ಆಗಾಮಿ ಕರ್ಮಗಳು ಎಂದು ಹೇಳುತ್ತಾರೆ. ಈ ಆಗಾಮಿ ಕರ್ಮಗಳನ್ನು ಮಾಡುವುದರಿಂದ ನಾವು ಪಾಪ-ಪುಣ್ಯಗಳನ್ನು ಸಂಪಾದಿಸಿಕೊಳ್ಳುತ್ತೇವೆ, ಅವು ಸಂಚಿತ ಕರ್ಮಗಳಲ್ಲಿ ಸೇರುತ್ತಿರುತ್ತವೆ. ಇದರಿಂದ ನಮಗೆ ಭವಿಷ್ಯತ್ತು ಎನ್ನುವುದು ಏರ್ಪಡುತ್ತದೆ. ಕರ್ಮವನ್ನು ಮಾಡುತ್ತಿದ್ದರೂ ಆ ಕರ್ಮಫಲ ಅಂಟದೇ ತಪ್ಪಿಸಿಕೊಳ್ಳುವ ಉಪಾಯ - ಅಹಂಕಾರ ಇಲ್ಲದೇ, ಪಾಪ-ಪುಣ್ಯಗಳನ್ನು ಬಯಸದೇ, ರಾಗ-ದ್ವೇಷಗಳಿಗೆ ಅತೀತವಾಗಿ ತಲುಪಿ ಕರ್ಮಗಳನ್ನು ಮಾಡಬೇಕು. ಹೀಗೆ ಮಾಡಿದರೆ ಕರ್ಮಗಳಿಗೆ ಫಲಿತವು ತಕ್ಷಣ ಸಿಗುತ್ತದೆ. ಇದರಿಂದ ಭವಿಷ್ಯತ್ತೆನ್ನುವುದು ಏರ್ಪಡುವುದಿಲ್ಲ. ಇದನ್ನು ಹೇಗೆ ಮಾಡಬೇಕೆನ್ನುವ ವಿಷಯವನ್ನು ತಿಳಿದುಕೊಳ್ಳುವುದಕ್ಕೆ "ರಾಗ-ದ್ವೇಷಗಳು" ಎನ್ನುವ ಟಾಪಿಕ್ ಅನ್ನು ಓದಿರಿ. ಜ್ಞಾನಾಗ್ನಿ
ಜ್ಞಾನಾಗ್ನಿ
ನಮಗೆ ಕರ್ತೃತ್ವಂ ಅಲ್ಲದೇ ಭೋಕ್ತೃತ್ವಂ ಸಹ ಇದೆ. ಅಂದರೆ ಕರ್ತನಾಗಿದ್ದು ಕರ್ಮಗಳನ್ನು ಮಾಡುತ್ತಿರುತ್ತೇವೆ, ಅದೇ ರೀತಿ (ಭೋಕ್ತ) ಫಲಾನುಭವಿಯಾಗಿಯೂ ಸಹ ಇದ್ದು ಮಾಡಿದ ಕರ್ಮಗಳಿಗೆ ಲಭಿಸುವ ಫಲವನ್ನು ಅನುಭವಿಸುತ್ತಾ ಇರುತ್ತೇವೆ. ಕರ್ಮಫಲವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ನಮಗೆ ಕರ್ತೃತ್ವ ಎನ್ನುವ ಎರಡನೆಯ ಭಾಗವೂ ಸಹ ಇದೆ. ಆದುದರಿಂದ ಒಂದು ಕಡೆ ಕರ್ಮಫಲವನ್ನು ಅನುಭವಿಸುತ್ತಾ ಮತ್ತೊಂದು ಕಡೆ ಹೊಸ ಕರ್ಮಗಳನ್ನು ಮಾಡುತ್ತಿರುತ್ತೇವೆ. ಈ ಮಾಡುವ ಕರ್ಮಗಳಲ್ಲಿ ನಮಗೆ ಬೇಕಾದಷ್ಟು ಸ್ವೇಚ್ಛೆ ಇದೆ. ಹೊಸ ಕರ್ಮಗಳನ್ನು ಮಾಡುವುದರಲ್ಲಿ ವಿಧಿಬರಹ ಅಥವಾ ಗತವು ನಿಮ್ಮ ಮೇಲೆ ಪೂರ್ತಿಯಾಗಿ ಪ್ರಭಾವವನ್ನು ತೋರಿಸಲಾರವು. ಅವು ಮತ್ತೇ ಅದೇ ಹಳೆಯ ಪದ್ಧತಿಯನ್ನು ಮುಂದುವರೆಸಬೇಕೆಂದು ಇಲ್ಲದಿದ್ದರೆ ಅನರ್ಥ ಸಂಭವಿಸುತ್ತದೆ ಎಂದು ಭಯಪಡಿಸಬಹುದು, ಆದರೆ ನಮಗೆ ಅದನ್ನು ಅತಿಕ್ರಮಿಸಿ ಹೊಸ ಪ್ರಯತ್ನವನ್ನು ಮಾಡುವ ಅವಕಾಶವು ಇದೆ.
ಹೇಗೆ ಕಂಪ್ಯೂಟರ್ ಕಂಡುಹಿಡಿದ ನಂತರ, ಟೈಪ್ ರೈಟರ್ ಮತ್ತು ಅದಕ್ಕೆ ಸಂಬಂಧಿಸಿದ ಜ್ಞಾನವನ್ನು ಮರೆತುಹೋದೆವೋ, ಅದೇ ರೀತಿಯಲ್ಲಿ ಪ್ರತಿಯೊಂದು ಸಮಸ್ಯೆಗೆ ಅನುಗುಣವಾದ ಹೊಸ ಪರಿಷ್ಕಾರವನ್ನು ಕಂಡುಕೊಳ್ಳಬೇಕು. ಆಗಲೇ ಅದಕ್ಕೆ ಸಂಬಂಧಿಸಿದ ಹಳೆಯ ಜ್ಞಾನ, ಹಾಗೆಯೇ ಅದಕ್ಕೆ ಸಂಬಂಧಿಸಿದ ಗತ ಕರ್ಮಗಳು ದಗ್ಧವಾಗುತ್ತವೆ. ಅಂದರೆ ಹಳೆಯ ಜ್ಞಾನವನ್ನು ಉಪಯೋಗಿಸಿಕೊಳ್ಳುವುದನ್ನು ಬಿಟ್ಟಿದ್ದೇಯಾದರೆ ಇದು ಸಂಭವಿಸುತ್ತದೆ. ಮೂರು ಗುಣಗಳ ಸಾಧನೆ
ನಾವು ಸಾಧಾರಣವಾಗಿ ವಿಧಿ ಲಿಖಿತೆಯಲ್ಲಿ ಏನಿದ್ದರೆ ಅದೇ ನಮ್ಮ ಹತ್ತಿರ ಬರುತ್ತದೆ ಎಂದು ನಾವು ಭಾವಿಸುತ್ತೇವೆ. ಅಂದರೆ ಒಳ್ಳೆಯದು ಇದ್ದರೆ ಒಳ್ಳೆಯದು ಅಥವಾ ಕೆಟ್ಟದ್ದು ಇದ್ದರೆ ಕೆಟ್ಟದು ಬರುತ್ತದೆ ಎಂದು ಭಾವಿಸುತ್ತೇವೆ. ಆದರೆ ಇಂದಿನಿಂದ ಈ ನಂಬಿಕೆಯನ್ನು ಸಹ ಬದಲಾಯಿಸಿ. ಎಲ್ಲ ವಿರೋಧಗಳು ಅಥವಾ ಮೂರು ಗುಣಗಳು ಸಮಾನ ಅನುಪಾತದಲ್ಲಿ ಬೆರೆತು ಏಕವಾಗಿ ಇರುವ ಸ್ವಚ್ಛವಾದ ಶಕ್ತಿ ಚೈತನ್ಯ ಎನ್ನುವುದು ವಿಧಿ ಲಿಖಿತದಿಂದ ಎಲ್ಲರಿಂದ ನನ್ನ ಬಳಿ ಬರುತ್ತದೆ ಎಂದು ಭಾವಿಸಿ. ಹಾಗೆಯೇ ನಾನು ಸಹ ಮೂರು ಗುಣಗಳು (ಒಳ್ಳೆಯದು ಕೆಟ್ಟದ್ದು ತಟಸ್ಥ) ಸಮಾನ ಅನುಪಾತದಲ್ಲಿ ಬೆರೆತು ಏಕವಾಗಿ ಇರುವ ಸ್ವಚ್ಛವಾದ ಶಕ್ತಿ ಚೈತನ್ಯವನ್ನು ಎಲ್ಲರಿಗೂ ಕಳುಹಿಸುತ್ತೇನೆ ಎಂದು ಭಾವಿಸಿ, ಈ ಸ್ಥಿತಿಯೊಂದಿಗೆ ಏಕವಾಗಿ ಇದ್ದಾಗ ನಮಗೆ ಸಂಕಲ್ಪ ಸ್ವೇಚೆ ಇರುತ್ತದೆ. ಅಂದರೆ ಒಳಗೆ ಹೊರಗೆ ಇರುವ ಎಲ್ಲದರಿಂದ ಎಲ್ಲದಕ್ಕೂ ಸ್ವಚ್ಛವಾದ ಶಕ್ತಿ ಚೈತನ್ಯ ಪ್ರವಹಿಸಬೇಕೆಂದು ಭಾವಿಸಿ.
ಗತದಿಂದ ಇಲ್ಲಿಯವರೆಗೆ ಮಾಡಿದ ಕರ್ಮಗಳಿಂದಾಗಿ ಸಂಪಾದಿಸಿದ ಪಾಪ-ಪುಣ್ಯಗಳನ್ನು ಸಂಚಿತ ಕರ್ಮಗಳು ಎಂದು ಹೇಳುತ್ತಾರೆ. ಪ್ರಾರಬ್ಧದಲ್ಲಿ ಬರೆದುಕೊಂಡು ಬಂದಿರುವ ಪಾಪ-ಪುಣ್ಯಗಳ ಹೊರತುಪಡಿಸಿ ಇಲ್ಲಿಯವರೆಗೆ ಅನುಭವಿಸದೇ ಉಳಿದಿರುವ ಕರ್ಮಫಲಗಳೆಲ್ಲವೂ ಸಂಚಿತ ಕರ್ಮಗಳ ಕೆಳಕ್ಕೆ ಬರುತ್ತವೆ. ಈ ದಿನಕ್ಕೆ ನಾಳೆ ಎನ್ನುವುದು ಭವಿಷ್ಯತ್ತು ಆಗುತ್ತದೆ. ಆದರೆ ನಾಡಿದ್ದಕ್ಕೆ ನಾಳೆ ಎನ್ನುವುದು ಗತವಾಗುತ್ತದೆ. ಆದುದರಿಂದ ಭವಿಷ್ಯತ್ತು ಎನ್ನುವುದು ಗತವಾದ ತಕ್ಷಣ ಆಗಾಮಿ ಕರ್ಮಗಳೆಲ್ಲವೂ ಸಂಚಿತ ಕರ್ಮಗಳಾಗಿ ಮಾರ್ಪಟ್ಟು ಅದರಲ್ಲಿ ಸೇರುತ್ತವೆ. ಆದುದರಿಂದ ಸಂಚಿತ ಕರ್ಮಗಳು ಸಂಪೂರ್ಣವಾಗಿ ಅಳಿಸಿ ಹೋಗಬೇಕೆಂದರೆ ಅವುಗಳನ್ನು ಜ್ಞಾನವೆನ್ನುವ ಅಗ್ನಿಯಲ್ಲಿ ದಗ್ಧ ಮಾಡಬೇಕು.
ಜನ್ಮ ಪಡೆಯುವ ಮುಂಚೆ ಬರೆದುಕೊಂಡು ಬಂದ ವಿಧಿಬರಹವನ್ನು ಪ್ರಾರಬ್ಧ ಕರ್ಮ ಎಂದು ಹೇಳುತ್ತಾರೆ. ಇವುಗಳನ್ನು ನೀವು ಪ್ರಸ್ತುತ ಜನ್ಮದಲ್ಲೇ ಅನುಭವಿಸುತ್ತೀರಿ. ಅಂದರೆ ನಿಮ್ಮ ಪ್ರಸ್ತುತ ಜನ್ಮ ಎನ್ನುವುದು ಮುಂಚಿತವಾಗಿಯೇ ನಿರ್ಣಯಿಸಲ್ಪಟ್ಟ ಪ್ರಕಾರವೇ ನಡೆಯುತ್ತಿದೆ ಎಂದು ಗ್ರಹಿಸಿರಿ. ಇದರಿಂದಾಗಿಯೇ ಕೆಲವರಿಗೆ ಎಷ್ಟೇ ಕಷ್ಟಪಟ್ಟರೂ ಫಲಿತಗಳು ಸಿಗುವುದಿಲ್ಲ, ಮತ್ತು ಕೆಲವರಿಗೆ ಸುಲಭವಾಗಿ ಫಲಿತಗಳು ಸಿಗುತ್ತವೆ, ಏಕೆಂದರೆ ಫಲಿತಗಳು ಕಷ್ಟಪಡುವುದರಿಂದ ಸಿಗುವುದಿಲ್ಲ, ವಿಧಿಬರಹದಲ್ಲಿರುವ ಪ್ರಕಾರವೇ ಲಭಿಸುತ್ತವೆ.
ತುಂಬಾ ಜನರು ದಾನ-ಧರ್ಮಗಳನ್ನು, ಅನೇಕ ಒಳ್ಳೆಯ ಕೆಲಸಗಳನ್ನು ಮತ್ತು ಸೇವೆಗಳನ್ನು ಮಾಡುತ್ತಾ, ಜೀವನದಲ್ಲಿ ಅಂದುಕೊಂಡದ್ದು ನಡೆಯುತ್ತವೆಂದು ಅಪೇಕ್ಷಿಸುತ್ತಾರೆ. ಆದರೆ ಅವರಿಗೆ ಅಂದುಕೊಂಡದ್ದು ನಡೆಯುತ್ತಿಲ್ಲ. ಇದಕ್ಕೆ ಕಾರಣ ಈ ಜೀವನದಲ್ಲಿ ನಡೆಯಬೇಕಾದದ್ದು ಪ್ರಾರಬ್ಧದಿಂದ ಮುಂಚಿತವಾಗಿಯೇ ನಿರ್ಣಯಿಸಲ್ಪಟ್ಟಿರುವುದರಿಂದ. ಆದುದರಿಂದ ಹಣೆಬರಹವನ್ನು ಅಳಿಸುವ ವಿದ್ಯೆಯನ್ನು ಕಲಿತುಕೊಳ್ಳುವುದೇ ಇದಕ್ಕೆ ಪರಿಷ್ಕಾರ.
ಮೇಲೆ ಹೇಳಿದ ರೀತಿಯಲ್ಲಿ ಫಲಾಪೇಕ್ಷೆಯಿಂದ ಕರ್ಮಗಳನ್ನು ಮಾಡಿದರೆ ಜನ್ಮ ಪರಂಪರೆ ಎನ್ನುವುದು ಸದಾ ಮುಂದುವರೆಯುತ್ತಲೇ ಇರುತ್ತದೆ. ಹಾಗಾದರೆ ಈ ಜನ್ಮವೇ ಅಂತಿಮ ಜನ್ಮವಾಗಬೇಕೆಂದರೆ ಏನು ಮಾಡಬೇಕು? ವಿಧಿಬರಹದ ಪ್ರಕಾರ ನಡೆಯುವ ಪ್ರಾರಬ್ಧ ಕರ್ಮಗಳನ್ನು ಇಷ್ಟಪಟ್ಟು ಅನುಭವಿಸಬೇಕು. ಮಾರ್ಗದರ್ಶಕನು ಎನ್ನುವ ಟಾಪಿಕ್ ನಲ್ಲಿ ತಿಳಿಸಿದ ಹಾಗೆ ಜೀವನದಲ್ಲಿ ಬರುತ್ತಿರುವ ಕಷ್ಟ-ಸುಖಃಗಳನ್ನು ದೈವ ಪ್ರಸಾದವೆಂದು ಭಾವಿಸಿ ಅನುಭವಿಸಬೇಕು. ಹಾಗೆಯೇ ಭವಿಷ್ಯತ್ತೆನ್ನುವುದು ಸೃಷ್ಟಿಸಲ್ಪಡದೇ ಇರುವುದಕ್ಕೆ, ಅಂದರೆ ಆಗಾಮಿ ಕರ್ಮಗಳು - ಸಂಚಿತ ಕರ್ಮಗಳಾಗದೇ ಇರುವುದಕ್ಕೆ ರಾಗ-ದ್ವೇಷಗಳಿಗೆ ಅತೀತವಾಗಿ ತಲುಪಿ ಕರ್ಮವನ್ನು ಮಾಡಬೇಕು, ಸಂಚಿತ ಕರ್ಮಗಳನ್ನು ಜ್ಞಾನಾಗ್ನಿಯಲ್ಲಿ ದಗ್ಧ ಮಾಡಬೇಕು. ಅಂದರೆ ಗತವನ್ನು ಸುಟ್ಟು ಹಾಕಬೇಕು ಮತ್ತು ಭವಿಷ್ಯತ್ತನ್ನು ಸೃಷ್ಟಿಸಬಾರದು. ಆಗಲೇ ಸದಾ ವರ್ತಮಾನದಲ್ಲಿರುವ ದೈವದೊಂದಿಗೆ ನಮ್ಮ ಸಂಯೋಗ ಸಂಭವವಾಗುತ್ತದೆ.
ಇವೆಲ್ಲವೂ ನಡೆಯಬೇಕೆಂದರೆ ನಿಮ್ಮ ಜೀವನದ ಗುರಿ ಬದಲಾಗಬೇಕು. ನೀವು ಕೇವಲ ಪ್ರಾಪಂಚಿಕವಾಗಿ ಅಂದುಕೊಂಡದ್ದು ಸಾಧಿಸಬೇಕೆನ್ನುವ ತಪನವನ್ನು (ಅನ್ವೇಷಣೆ) ಬಿಡಬೇಕು. ನೀವು ಕೇವಲ ಪ್ರಾಪಂಚಿಕ ಮಾಯೆಯಲ್ಲಿ ಸಿಲುಕಿಕೊಂಡಿದ್ದರೆ ನೀವು ಅಂದುಕೊಂಡವುಗಳು ಎಂದಿಗೂ ನಡೆಯುವುದಿಲ್ಲ. ಅಂದುಕೊಂಡವುಗಳಲ್ಲಿ ಕೆಲವು ನಡೆದರೂ ಅವು ವಿಧಿಬರಹದಲ್ಲಿ ಇರುವುದರಿಂದ ಸಂಭವಿಸುತ್ತವೆ, ವಿಧಿಬರಹದಲ್ಲಿ ಇಲ್ಲದಿದ್ದರೆ ಎಂದಿಗೂ ಸಂಭವಿಸುವುದಿಲ್ಲ ಎನ್ನುವ ವಿಷಯವನ್ನು ಗ್ರಹಿಸಿರಿ.
ನೀವು ಅಪೇಕ್ಷಿಸುತ್ತಿರುವುದು ಪ್ರಾಪಂಚಿಕದ್ದಾದರೆ ಅದು ಸಂಭವಿಸುತ್ತದೆ ಎನ್ನುವ ಖಾತರಿ ಇಲ್ಲ. ಕರ್ಮ, ವಿಧಿಬರಹವನ್ನು ಆಧರಿಸಿ ಖಂಡಿತವಾಗಿ ನಡೆಯುತ್ತದೆ. ಆದುದರಿಂದ ಕೇವಲ ಪ್ರಾಪಂಚಿಕ ಜೀವನ ಎನ್ನುವುದು ಅಸಂತೃಪ್ತಿಯಾಗಿ ಮತ್ತು ದುಃಖಪೂರಿತವಾಗಿಯೂ ಇರುತ್ತದೆ. ಆದರೆ ನೀವು ಎಷ್ಟೇ ಪಾಪಾತ್ಮರಾದರೂ ನೀವು ಅಪೇಕ್ಷಿಸಿದ್ದು ಆಧ್ಯಾತ್ಮಿಕದ್ದಾದರೆ, ಅಂದರೆ ಪರಮಾತ್ಮನಿಗೆ ಸಂಬಂಧಿಸಿದ್ದಾದರೆ ಖಂಡಿತವಾಗಿ ನೆರವೇರುತ್ತದೆ. ಆದುದರಿಂದ ಮಾನವನು ದೈವಿಕವಾಗಿ ಏನಾದರೂ ಎಷ್ಟಾದರೂ ಅಪೇಕ್ಷಿಸಬಹುದು.
ಆತ್ಮಗಳನ್ನು ಹುಟ್ಟಿಸಿದ್ದು ಪರಮಾತ್ಮ. ಜೀವಾತ್ಮಗಳನ್ನು ಹುಟ್ಟಿಸಿದ್ದು ಆತ್ಮಗಳು. ಆದುದರಿಂದ ಮಾಯೆಯ ಪ್ರಭಾವಕ್ಕೆ ಒಳಗಾದ ಜೀವಾತ್ಮರಾದ ನೀವು, ತಂದೆಯ (ಆತ್ಮದ) ಬಳಿ, ತಾತನ (ಪರಮಾತ್ಮನ) ಬಳಿ ಯಾವ ಸ್ಥಿತಿಯಲ್ಲಾದರೂ ತಲುಪಬಹುದು. ಇದು ನಿಮ್ಮ ಜನ್ಮಹಕ್ಕು. ನೀವು ನೀಚವಾದ ಪಾಪಕಾರ್ಯಗಳನ್ನು ಮಾಡಿದ್ದರೂ ಈ ಹಕ್ಕನ್ನು ಯಾರೂ ತಡೆಯಲು ಸಾಧ್ಯವಿಲ್ಲವೆಂದು ಗ್ರಹಿಸಿರಿ. ಇವರ ಬಳಿಗೆ ತಲುಪುವುದಕ್ಕೆ ವಿಧಿಬರಹದೊಂದಿಗೂ ಸಹ ಯಾವುದೂ ಅಡ್ಡ ಬರುವುದಿಲ್ಲ. ಆದುದರಿಂದ ನೀವು ಆತ್ಮ ಜ್ಞಾನವನ್ನು ಪಡೆಯಬೇಕು, ದೇವರ ಸನ್ನಿಧಿಗೆ ತಲುಪಬೇಕೆಂದು ಬಯಸಿರಿ.
ಆದರೆ ದೇವರ ಬಳಿ ತಲುಪಬೇಕೆಂದರೆ ಅವನಿಗೆ ಸಂಬಂಧಿಸಿದ ಜ್ಞಾನ ತಿಳಿಯಬೇಕು. ಅವನ ಗುಣಗಳ ಬಗ್ಗೆ ನಮಗೆ ತಿಳಿಯಬೇಕು. ಅವನು ರಾಗ-ದ್ವೇಷಗಳಿಗೆ, ತ್ರಿಗುಣಗಳಿಗೆ, ಪಾಪ-ಪುಣ್ಯಗಳಿಗೆ ಅತೀತನು. ಅವನು ಒಳಗೆ ಹೊರಗೆ ಎಲ್ಲೆಡೆ ವ್ಯಾಪಿಸಿಕೊಂಡಿರುತ್ತಾನೆ. ಆದುದರಿಂದ ನೀವು ರಾಗ-ದ್ವೇಷಗಳಿಗೆ, ಪಾಪ-ಪುಣ್ಯಗಳಿಗೆ ಅತೀತವಾಗಿ ತಲುಪುವ ಪ್ರಯತ್ನವನ್ನು ಮಾಡಬೇಕು. ದೈವಿಕ ಗುಣಗಳನ್ನು ಹೆಚ್ಚಿಸಿಕೊಳ್ಳಬೇಕು. ಆಗಲೇ ನಿಮಗೆ ಅವನೊಂದಿಗೆ ಸಂಯೋಗ ಸಂಭವಿಸುತ್ತದೆ. ದೈವ ಜ್ಞಾನವನ್ನು ತಿಳಿದುಕೊಳ್ಳುವುದೆನ್ನುವುದು ನಿಮ್ಮ ಜನ್ಮಹಕ್ಕು, ಆದುದರಿಂದ ಇದನ್ನು ನೀವು ತಪ್ಪದೇ ವಿನಿಯೋಗಿಸಿಕೊಳ್ಳಿ. ಏಕೆಂದರೆ ಆಗಲೇ ನಿಮ್ಮ ಕೋರಿಕೆಗಳು ಈಡೇರುವ ಅವಕಾಶ ಇರುತ್ತದೆ.
ದೇವರು ತನ್ನ ಮೇಲಿನ ಅಧಿಕಾರವನ್ನು ಮಾನವರಿಗೆ ಬಿಟ್ಟುಕೊಟ್ಟು, ತಾನು ಮಾನವರ ಮೇಲೆ, ಈ ಪ್ರಪಂಚದ ಮೇಲೆ ಅಧಿಕಾರವನ್ನು ಪಡೆದುಕೊಂಡಿದ್ದಾನೆ. ಅಂದರೆ ದೇವರಿಗೆ ಮಾನವರ ಮೇಲೆ ಅಧಿಕಾರ, ಮಾನವರಿಗೆ ದೇವರ ಮೇಲೆ ಅಧಿಕಾರ ಇದೆ ಎಂದರ್ಥ. ಪ್ರಪಂಚದ ಮೇಲೆ ಯಾವ ಮಾನವನಿಗೂ ಹಕ್ಕಿಲ್ಲ. ಅದರ ಮೇಲೆ ಹಕ್ಕು ಕೇವಲ ದೇವರಿಗೆ ಮಾತ್ರ ಇದೆ. ಮಾನವನು ದೇವರ ಬಳಿ ತಲುಪುವುದಕ್ಕೆ ಮಾತ್ರ ಪ್ರಕೃತಿ ರೂಪಗಳನ್ನು ಅಂದರೆ ಪ್ರಪಂಚವನ್ನು ಉಪಯೋಗಿಸಿಕೊಳ್ಳಬಹುದು. ಆದುದರಿಂದ ನಿಮಗಿರುವ ಹಕ್ಕಿನ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿ. ನಿಮಗಿರುವ ಜನ್ಮಹಕ್ಕನ್ನು ಬಿಟ್ಟು ಇಲ್ಲದ ಹಕ್ಕುಗಳಿಗಾಗಿ ಚಡಪಡಿಸಬೇಡಿ.
ಆದುದರಿಂದ ನೀವು ಇಡಬೇಕಾದ ಸಂಕಲ್ಪ ಆತ್ಮ ಸ್ಥಿತಿಗೆ ತಲುಪುವುದು, ಆತ್ಮ ಜ್ಞಾನವನ್ನು ಪಡೆಯುವುದು, ಪರಮಾತ್ಮನಲ್ಲಿ ಐಕ್ಯವಾಗುವುದು, ಈ ಜ್ಞಾನವನ್ನು ಇತರರಿಗೆ ಹಂಚುವುದು. ಈ ಸಂಕಲ್ಪವು ಆಧ್ಯಾತ್ಮಿಕವಾದದ್ದು, ಇದು ನಿಮ್ಮ ಜನ್ಮ ಹಕ್ಕು, ಇದು ಪ್ರಪಂಚಕ್ಕೆ ಸಂಬಂಧಿಸಿರುವುದು ಅಲ್ಲ. ಆದ್ದರಿಂದ ಇದು ಖಂಡಿತವಾಗಿ ಈಡೇರುತ್ತದೆ. ಹೀಗೆ ಸಂಕಲ್ಪಿಸಿ ಅದಕ್ಕನುಗುಣವಾಗಿ ನೀವು ಪ್ರಯತ್ನಿಸಿದರೆ, ನಿಮ್ಮ ಪ್ರಾಪಂಚಿಕದ ಕೋರಿಕೆಗಳು ಅವಷ್ಟಕ್ಕವೇ ನೆರವೇರುತ್ತವೆ. ಏಕೆಂದರೆ ನೀವು ದೈವದ ಕಡೆಗೆ ಪಯಣಿಸುತ್ತಿರುವುದರಿಂದ. ಆಗ ದೈವವು ನಿಮಗೆ ಅವಶ್ಯಕವಾದ ಎಲ್ಲವನ್ನೂ ಒದಗಿಸುವ ಜವಾಬ್ದಾರಿ ವಹಿಸುತ್ತಾನೆ. ಹೀಗೆ ಮಾಡಿದರೆ ಕರ್ಮವು ವಿಧಿಬರಹದ ಪ್ರಕಾರ ಅಲ್ಲದೇ ಹೊಸದಾಗಿ ನಿಮ್ಮ ಜೀವನ ಮುಂದುವರೆಯುತ್ತದೆ. ಅಲ್ಲಿಯವರೆಗೆ ಪರಿಹಾರ ಸಿಗದ ಸಮಸ್ಯೆಗಳಿಗೆಲ್ಲಾ ಪರಿಹಾರಗಳು ಲಭಿಸುತ್ತವೆ.
ಆದುದರಿಂದ ನಿಮಗೆ ಕಷ್ಟ ಬಂದ ತಕ್ಷಣ ಇತರರನ್ನು ದೂಷಿಸುವುದನ್ನು ನಿಲ್ಲಿಸಿ, ಅದರ ಜವಾಬ್ದಾರಿಯನ್ನು ವಹಿಸಿ, ವಿಧಿಬರಹದಲ್ಲಿರುವುದರಿಂದ ಹೀಗೆ ನಡೆದಿದೆ ಎಂದು ಭಾವಿಸಿ, ಆ ಕಷ್ಟವನ್ನು ಉಪಯೋಗಿಸಿಕೊಂಡು ಆತ್ಮಸ್ಥಿತಿಗೆ ತಲುಪಿ, ಆ ಕಷ್ಟಕ್ಕೆ ಸಂಬಂಧಿಸಿದ ಹೊಸ ಪರಿಹಾರವನ್ನು ಆತ್ಮದ ಬಳಿ ಪಡೆದು, ಆತ್ಮ ಸೂಚಿಸಿದ ಜ್ಞಾನವನ್ನು ಆಚರಿಸಿ, ಅದರ ಮೂಲಕ ಆನಂದ ಸ್ಥಿತಿಗೆ ತಲುಪಿ, ಆ ಕಷ್ಟಕ್ಕೆ ಸಂಬಂಧಿಸಿದ ಲಕ್ಷಣಗಳೆಲ್ಲಾ ದಿವ್ಯವಾದವುಗಳೇ ಎನ್ನುವ ಭಾವನೆ ನಿಮ್ಮಲ್ಲಿ ಎಚ್ಚೆತ್ತುಕೊಂಡ ನಂತರವೇ, ಜ್ಞಾನಾಗ್ನಿ ಎನ್ನುವುದು ಹುಟ್ಟಿ, ಅದರಲ್ಲಿ ಆ ಕಷ್ಟಕ್ಕೆ ಸಂಬಂಧಿಸಿದ ಕರ್ಮಗಳೆಲ್ಲವೂ ದಗ್ಧವಾಗುತ್ತವೆ. ಆನಂತರವೇ ಅದಕ್ಕೆ ಸಂಬಂಧಿಸಿದ ಪರಿಹಾರ ಸಿಗುತ್ತದೆ. ಅಂದರೆ ವಿಧಿಬರಹದಲ್ಲಿ ಮತ್ತು ಸಂಚಿತ ಕರ್ಮದಲ್ಲಿ ಅದಕ್ಕೆ ಸಂಬಂಧಿಸಿರುವ ಕರ್ಮಗಳು ದಗ್ಧವಾದಾಗಲೇ ನಿಮಗೆ ಪರಿಹಾರ ಸಿಗುತ್ತದೆ. ಅಂದರೆ ಏನನ್ನಾದರೂ ಸಂಕಲ್ಪಿಸಿದಾಗ, ಮೊದಲು ಅದಕ್ಕೆ ಸಂಬಂಧಿಸಿ ಗತದಲ್ಲಿರುವ ಅಡಚಣೆಗಳನ್ನು ತೊಲಗಿಸಿಕೊಂಡಾಗಲೇ ಆ ಸಮಸ್ಯೆಗೆ ಪರಿಹಾರ ಲಭಿಸುತ್ತದೆಂದು ಗ್ರಹಿಸಿರಿ.
ಉದಾಹರಣೆಗೆ ನಿಮಗೆ ಶರೀರದಲ್ಲಿ ನೋವುಂಟಾಗಿದೆ. ಆಗ ನೀವು ಆ ನೋವನ್ನು "ನನ್ನನ್ನು ದೇವರ ಬಳಿ ಕರೆದುಕೊಂಡು ಹೋಗೆಂದು" ಸೂಚಿಸಿ ಅದನ್ನು ಇಷ್ಟದಿಂದ ಅನುಭವಿಸಿ ದೇವರ ಬಳಿ ತಲುಪಿ, ಇದು ಯಾವಾಗ ಸಹಾಯ ಮಾಡುತ್ತದೆ, ಇದು ಯಾವಾಗ ತೊಂದರೆ ಕೊಡುತ್ತದೆ, ಇದು ಹೇಗೆ ದಿವ್ಯವಾದ ಶಕ್ತಿ, ಇದನ್ನು ದಿವ್ಯವಾದ ಶಕ್ತಿಯಾಗಿ ನೋಡಬೇಕೆಂದರೆ ಏನು ಮಾಡಬೇಕು ಎಂದು ಆತ್ಮ ವನ್ನು ಕೇಳಿ ತಿಳಿದುಕೊಂಡು, ಅದನ್ನು ನೀವು ಆಚರಿಸಿ, ಅನುಭವಪೂರ್ವಕವಾಗಿ ಅದನ್ನು ದಿವ್ಯವಾದ ಶಕ್ತಿಯನ್ನಾಗಿ ಅನುಭೂತಿ ಹೊಂದಬೇಕು.
"ಮಾರ್ಗದರ್ಶಕನು" ಟಾಪಿಕ್ ನಲ್ಲಿ ತಿಳಿಸಿದ ಹಾಗೆ ಆ ನೋವನ್ನು ಪರಮಾನಂದವಾಗಿ ಪರಿವರ್ತನೆ ಮಾಡುವಂತಾಗಬೇಕು. "ಸಾಕ್ಷಿ" ಟಾಪಿಕ್ ನಲ್ಲಿ ತಿಳಿಸಿದ ಹಾಗೆ ಆ ನೋವಿನ ಮೂಲಕ ಸಾಕ್ಷಿ ಸ್ಥಿತಿ ಎಚ್ಚೆತ್ತುಕೊಳ್ಳಬೇಕು.
ಆಗ ನಿಮಗೆ ಅನುಭವಪೂರ್ವಕವಾಗಿ ತಿಳಿಯುತ್ತದೆ, ಸಮಸ್ಯೆ ನೋವಿನಲ್ಲಿ ಇಲ್ಲವೆಂದು, ತನ್ನಲ್ಲೇ ಇದೆ ಎಂದು, ನೋವಿನಲ್ಲಿ ಸಹಾಯ ಮಾಡುವ ಗುಣವನ್ನು ತಾನು ಗತದಲ್ಲಿ ಗುರುತಿಸಲಾರದೆ ಅದನ್ನು ದ್ವೇಷಿಸುವುದರಲ್ಲೇ ಸಮಸ್ಯೆ ಇದೆ ಎಂದು. ಹೀಗೆ ನೀವು ತಿಳಿದುಕೊಂಡಾಗಲೇ, ನೋವಿಗೆ ಸಂಬಂಧಿಸಿ ನೀವು ಗತದಲ್ಲಿ ಮಾಡಿದ ಕರ್ಮಗಳೆಲ್ಲಾ ಈ ಜ್ಞಾನದಿಂದ ಉದ್ಭವಿಸಿದ ಅಗ್ನಿಯಲ್ಲಿ ದಗ್ಧವಾಗುತ್ತವೆ. ಆನಂತರ ಆ ನೋವಿಗೆ ಬೇಕಾದ ಪರಿಹಾರ ಲಭಿಸುತ್ತದೆ, ಇಲ್ಲದಿದ್ದರೆ ಆ ತೊಂದರೆ ಎನ್ನುವುದು ಮುಂದುವರೆಯುತ್ತಲೇ ಇರುತ್ತದೆ.
ಹಾಗೆಯೇ ಸುಖ ಬಂದಾಗಲೂ ಸಹ ಇದೇ ರೀತಿಯಾಗಿ ಮಾಡಿ. ಏಕೆಂದರೆ ನೀವು ಸುಖಗಳಿಗೆ, ಗೆಲುವುಗಳಿಗೆ ಗುಲಾಮರಾಗಿದ್ದೀರಿ, ಹಾಗೆಯೇ ಸುಖದಲ್ಲಿ ದೇವರನ್ನು ಮರೆಯುವ ಅಭ್ಯಾಸ ನಿಮಗಿದೆ. ಒಳ್ಳೆಯದರಲ್ಲಿ ಸಹಾಯ ಮಾಡುವ ಗುಣ ಮತ್ತು ತೊಂದರೆಯನ್ನುಂಟು ಮಾಡುವ ಗುಣಗಳೆರಡೂ ಇರುತ್ತವೆ ಎನ್ನುವುದನ್ನು ಗ್ರಹಿಸಿರಿ. ಹಾಗೆಯೇ ಒಳ್ಳೆಯದನ್ನು ಮಾಡಿದರೆ ಪುಣ್ಯ ಬರುತ್ತದೆಂದು, ಆ ಪುಣ್ಯದಿಂದ ಪಾಪಗಳು ದಗ್ಧವಾಗುತ್ತವೆ ಎನ್ನುವ ಭ್ರಮೆಯಲ್ಲಿದ್ದು ತುಂಬಾ ಜನರು ಪುಣ್ಯಕ್ಕೆ ಗುಲಾಮರಾಗಿದ್ದಾರೆ. ಆದರೆ ನೀವೆಷ್ಟು ಪುಣ್ಯ ಮಾಡಿದರೂ ಗತದಲ್ಲಿ ಮಾಡಿದ ಪಾಪದ ಫಲವೆನ್ನುವುದು ಖಂಡಿತವಾಗಿ ನಿಮ್ಮ ಬಳಿ ಬರುತ್ತದೆ. ಹಾಗೆಯೇ ಪುಣ್ಯ ಮಾಡಿದರೆ ಅದಕ್ಕೆ ತಕ್ಕಂತೆ ಪಾಪವನ್ನೂ ಸಹ ಖಂಡಿತವಾಗಿ ಮಾಡಬೇಕಾದ ಪರಿಸ್ಥಿತಿ ನೆಲೆಗೊಳ್ಳುತ್ತದೆ. ಈ ಪ್ರಪಂಚದಲ್ಲಿ ಕೇವಲ ಪುಣ್ಯವನ್ನು ಮಾತ್ರ ಮಾಡುವುದೆನ್ನುವುದು ಅಸಾಧ್ಯ. ಒಂದು ವೇಳೆ ಸಾಧ್ಯವಾದರೂ ಆ ಪುಣ್ಯವನ್ನು ಅನುಭವಿಸುವುದಕ್ಕೆ ಮತ್ತೊಂದು ಜನ್ಮ ಪಡೆಯಬೇಕಾಗುತ್ತದೆ. ಏಕೆಂದರೆ ನಿಮ್ಮ ಪ್ರಸ್ತುತ ಜನ್ಮ ಎನ್ನುವುದು ವಿಧಿಬರಹದ ಮೂಲಕ ಮುಂಚಿತವಾಗಿಯೇ ನಿರ್ಣಯಿಸಲ್ಪಟ್ಟಿದೆ. ಆದ್ದರಿಂದ ಇದಕ್ಕೆ ಪರಿಹಾರ ಪಾಪ-ಪುಣ್ಯಗಳ ಮೂಲಕ ದೈವದ ಬಳಿ ತಲುಪಿ, ಪಾಪ-ಪುಣ್ಯಗಳೆರಡನ್ನೂ ದಗ್ಧ ಮಾಡುವುದು.
ಹೀಗೆ ನೀವು ಮೂರು ಗುಣಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಲಕ್ಷಣಗಳನ್ನು ದಿವ್ಯವಾಗಿ ನೋಡಿದಾಗಲೇ, ಅವುಗಳನ್ನು ದೈವದ ಪ್ರತಿಬಿಂಬಗಳನ್ನಾಗಿ ನೋಡಿದಾಗಲೇ, ಅವುಗಳ ಮೂಲಕ ದಿವ್ಯಾನುಭೂತಿಯನ್ನು ಹೊಂದಿದಾಗಲೇ, ಎಲ್ಲದರಲ್ಲೂ ದೈವ ಮತ್ತು ದೈವ ಶಕ್ತಿ ಅಡಗಿದೆ ಎಂದು ಅನುಭವಪೂರ್ವಕವಾಗಿ ತಿಳಿದುಕೊಂಡಾಗಲೇ, ನೀವು ಕರ್ಮ ಸಿದ್ಧಾಂತದಿಂದ ಹೊರ ಬಂದು ಮುಕ್ತಿಯನ್ನು ಪಡೆಯುತ್ತೀರಿ. ಇಲ್ಲದಿದ್ದರೆ ಕರ್ಮ ಚಕ್ರದಲ್ಲೇ ಸಿಲುಕಿಕೊಳ್ಳುತ್ತೀರಿ. ಆದುದರಿಂದ ನೀವು ಪ್ರಾರಬ್ಧ, ಆಗಾಮಿ, ಸಂಚಿತ ಕರ್ಮಗಳನ್ನು ಹೇಗೆ ಅತಿಕ್ರಮಿಸಬೇಕೆನ್ನುವ ವಿಷಯವನ್ನು ತಿಳಿದುಕೊಳ್ಳಲು ಶ್ರಮಿಸಿರಿ. "ಶ್ರದ್ಧಾವಾನ್ ಲಭತೇ ಜ್ಞಾನಂ" ಎಂದು ಹೇಳಿದ್ದಾರೆ, ಆದುದರಿಂದ ನೀವೆಷ್ಟು ಶ್ರದ್ಧೆ ವಹಿಸುತ್ತೀರೋ ಅಷ್ಟು ಆತ್ಮ ಜ್ಞಾನ ನಿಮಗೆ ಲಭಿಸುತ್ತದೆ. ಅದನ್ನು ಆಚರಿಸಿದಾಗಲೇ ನೀವು ಅಂದುಕೊಂಡದ್ದು ಸಾಧಿಸುತ್ತೀರಿ, ಇಲ್ಲದಿದ್ದರೆ ನೀವು ಬಾಧಿತರಾಗಿಯೇ (Victim) ಮುಂದುವರೆಯುತ್ತೀರೆಂದು ಗ್ರಹಿಸಿರಿ.
****************************